ನಿನ್ನ ಪಾಲು..

ಪ್ರಿಯೆ ನನ್ನ ಕವನದಲ್ಲಿ
ನಿನ್ನದೂ ಪಾಲಿದೆ
ನಿನಗಾಗೆ ಬರೆದ
ಒ0ದೊಳ್ಳೆ ಸಾಲಿದೆ
ಲೆ ಗೂಬೆ ಅಲ್ನೋಡೆ
ಗ್ಯಾಸ್ ಮೇಲೆ ಹಾಲಿದೆ…

ಪ್ರಮೋದ

ಬಂತು ಬಂತು ‘ದೀಪಾವಳಿ’

ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ,ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:

* ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
* ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ

ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.(Information From, Wikipedia)

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ.

ರಾಜಕೀಯ…

* ಇಂದು ಎಚ್ ಡಿಕೆ ದಂಪತಿ ಕೋರ್ಟಿಗೆ ಹಾಜರಾಗಿಲ್ಲ:ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಇಂದೂ ಲೋಕಾಯುಕ್ತ ಕೋರ್ಟಿಗೆ ಹಾಜರಾಗಿಲ್ಲ.

* ಯಡಿಯೂರಪ್ಪ ಅವರು ಚಿಕಿತ್ಸೆಗೆಂದು ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ.

ಸುದ್ದಿ ವಿನಿಮಯ.

ಸುದ್ದಿ ವಿನಿಮಯ ಅನ್ನೋ ಹೊಸ ಅಂಕಣವನ್ನು ನಿಮ್ಮ ಮುಂದೆ ತರಲಿದ್ದೇನೆ…

ಇದರಲ್ಲಿ ಇತ್ತೀಚಿನ ಪ್ರಮುಖ ವಿಶೇಷ ಸುದ್ದಿಗಳ ಮಾಹಿತಿ… ಮನದ ನುಡಿಯ ಓದುಗರಿಗಾಗಿ..ನಿರೀಕ್ಷಿಸಿ……..